ಹುಬ್ಬಳ್ಳಿ, ನ 17 (DaijiworldNews/HR): ಬಿಜೆಪಿಯ ಹಿರಿಯ ನಾಯಕ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಿ.ಕೆ. ಚವ್ಹಾಣ ತಮ್ಮ 75ರ ವಯಸ್ಸಿನಲ್ಲಿ ಪತ್ನಿ ಶಾರದಾ ಅವರ ಸಹೋದರಿ ಅನುಸೂಯಾ ಅವರನ್ನು ಎರಡನೇ ಮದುವೆಯಾಗಿದ್ದಾರೆ.
ಡಿ.ಕೆ. ಚವ್ಹಾಣ ಮದುವೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅದ್ಧೂರಿಯಾಗಿ ನಡೆದಿದೆ.
ಇನ್ನು ಚವ್ಹಾಣ ಅವರ ವಿವಾಹ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಸಂಬಂಧಿಕರು ಭಾಗಿಯಾಗಿದ್ದರು.
ಕಳೆದ ಮೂರು ತಿಂಗಳ ಹಿಂದೆ ಚವ್ಹಾಣ ಮೊದಲ ಪತ್ನಿ ಶಾರದಾ ಮೃತಪಟ್ಟಿದ್ದು, ಪತ್ನಿ ಅಗಲಿದ ಮೂರು ತಿಂಗಳ ನಂತರ ಪತ್ನಿಯ ಸಹೋದರಿ ಅನಸೂಯಾ ಅವರನ್ನು ಮದುವೆಯಾಗಿದ್ದು, ಅನಸೂಯಾ ಅವರಿಗೆ ಇದು ಮೊದಲ ಮದುವೆಯಾಗಿದೆ.