ಕೋಲ್ಕತ್ತಾ, ನ 17 (DaijiworldNews/MS): ಪಶ್ಚಿಮ ಬಂಗಾಳದ ಸಂಸದರೊಬ್ಬರ ಕಾರು ಢಿಕ್ಕಿಯಾಗಿ ಆರು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಮುರ್ಷಿದಾಬಾದ್ನ ಪಿಪ್ದೇಖಾಲಿ ಬಜಾರ್ನಲ್ಲಿ ನಡೆದಿದೆ.
ಮೃತ ಮಗುವನ್ನು ಮುರ್ಷಿದಾಬಾದ್ ನಿವಾಸಿ ಹಾಶಿಮ್ ಸರ್ಕಾರ್ (6) ಎಂದು ಗುರುತಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ನ ಮುರ್ಷಿದಾಬಾದ್ ಸಂಸದ ಅಬು ತಾಹೆರ್ ಖಾನ್ , ಬರ್ಹಮ್ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಮಗು ತನ್ನ ತಾಯಿಯೊಂದಿಗೆ ತೆರಳಿದ್ದು , ಬ್ಯಾಂಕ್ನಲ್ಲಿ ಕೆಲವು ಕೆಲಸಗಳನ್ನು ಮುಗಿಸಿ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರು ಮಗು ಬದುಕುಳಿಯಲಿಲ್ಲ.
ಕಾರು ಚಾಲಕನನ್ನು ಬಂಧಿಸಲಾಗಿದ್ದು, ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.