ನವದೆಹಲಿ, ನ 16 (DaijiworldNews/MS): ಇನ್ನು ಮುಂದೆ ರೈಲುಗಳಲ್ಲಿ ಪ್ರಯಾಣಿಕರು ತಮ್ಮಿಷ್ಟದ ಸ್ಥಳೀಯ ಊಟ-ತಿಂಡಿ ಸವಿಯಬಹುದು. ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ಜನಪ್ರಿಯ ಆಹಾರ-ಪದಾರ್ಥ, ಹಬ್ಬ-ಹರಿದಿನಗಳ ತಿನಿಸು, ಸೀಜನಲ್ ಫುಡ್, ಇಂಡಿಯನ್ ರೈಲ್ವೇ ಕೆಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ನ ಮೆನುವಿನಲ್ಲಿ ಲಭ್ಯ ಇರಲಿದೆ.
ಮಕ್ಕಳಿಗಾಗಿ ಪ್ರತ್ಯೇಕ ಬೇಬಿ ಫುಡ್ , ಮಧುಮೇಹಿಗಳಿಗೂ ಪ್ರತ್ಯೇಕ ಆಹಾರ ಆಯ್ಕೆಗೆ ಅವಕಾಶವಿರುತ್ತದೆ. ಜತೆಗೆ ಸಿರಿಧಾನ್ಯದ ಫೂಡ್ ಕೂಡ ಇರಲಿದೆ. ಈ ಸಂಬಂಧ ಏಕರೂಪದ ಆಹಾರ ಖಾದ್ಯದ ಬದಲು, ಸ್ಥಳೀಯ ಊಟ-ತಿಂಡಿಗೆ ಆದ್ಯತೆ ನೀಡಲು IRCTCಗೆ ಅವಕಾಶ ಕೊಟ್ಟು ರೈಲ್ವೆ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ಆಹಾರ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರೈಲ್ವೇ ಮಂಡಳಿ ವತಿಯಿಂದ ಐಆರ್ಸಿಟಿಸಿಗೆ ಕಳುಹಿಸಲಾಗಿರುವ ಟಿಪ್ಪಣಿಯೊಂದರಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.