ಮುಂಬೈ(ಮಹಾರಾಷ್ಟ್ರ), ನ 15 (DaijiworldNews/DB): ಮುಂಬೈನಲ್ಲಿ ದಡಾರ ಕಾಯಿಲೆ ವ್ಯಾಪಕವಾಗುತ್ತಿದ್ದು, ಒಂದು ವರ್ಷದ ಮಗು ಮೃತಪಟ್ಟಿದೆ. 126 ಮಕ್ಕಳಲ್ಲಿ ರೋಗ ಕಕಾಣಿಸಿಕೊಂಡಿದೆ.
ದಡಾರದಿಂದ ಬಳಲುತ್ತಿದ್ದ ನುಲ್ಲು ಬಜಾರ್ ಪ್ರದೇಶದ ಒಂದು ವರ್ಷದ ಗಂಡು ಮಗು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದಾನೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ದಡಾರದಿಂದಾಗಿ ಮಗುವಿನ ಮೂತ್ರಪಿಂಡಕ್ಕೆ ಹಾನಿಯಾಗಿತ್ತು. ಹೀಗಾಗಿ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಮುಂಬೈಯ ವಿವಿಧೆಡೆ ದಡಾರ ಕಾಯಿಲೆಯಿಂದಾಗಿ ಮಕ್ಕಳು ಹೈರಾಣಗಿದ್ದು, ಮುಂಬೈ ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಇದಕ್ಕಾಗಿ ವಿಶೇಷ ವಾರ್ಡ್ಗಳನ್ನು ಸ್ಥಾಪಿಸಲಾಗಿದೆ.