ನವದೆಹಲಿ, ನ 13 (DaijiworldNews/HR): ಪಾಕಿಸ್ತಾನದ ಗಡಿಯುದ್ದಕ್ಕೂ ಡ್ರೋನ್ ಗಳು ಭಾರತದೊಳಗೆ ನುಗಿಸುವ ಪಯತ್ನಗಳು ದ್ವಿಗುಣಗೊಂಡಿದ್ದು, ಬಿಎಸ್ಎಫ್ ಪಡೆಗಳು ಅನೇಕ ಡ್ರೋನ್ ಗಳನ್ನು ಹೊಡೆದುರುಳಿಸಿದ್ದಾರೆ ಎಂದು ಡೈರೆಕ್ಟರ್ ಜನರಲ್ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಅವರು, 2020 ರಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 79 ಡ್ರೋನ್ ಹಾರಾಟ ಬಿಎಸ್ಎಫ್ ಪತ್ತೆ ಮಾಡಿದ್ದು, 2021ರಲ್ಲಿ 109 ಕ್ಕೆ ಏರಿದ್ದು ಮತ್ತು ಈ ವರ್ಷ ಈವರೆಗೆ 266 ಕಂಡುಬಂದಿದ್ದು ಸಂಖ್ಯೆ ದ್ವಿಗುಣಗೊಂಡಿದೆ ಎಂದಿದ್ದಾರೆ.
ಇನ್ನು ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನಾದ್ಯಂತ ಹಾದುಹೋಗುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ 3,000 ಕಿ.ಮೀ.ಗೂ ಹೆಚ್ಚು ಕಾವಲು ಕಾಯುವ ಬಿಎಸ್ಎಫ್ಗೆ ಸವಾಲಾಗಿದೆ.