ಶ್ರೀಕಾಕುಳಂ (ಆಂಧ್ರಪ್ರದೇಶ), ನ 11 (DaijiworldNews/DB): ತಾಯಿಯೆಂದರೆ ಮಕ್ಕಳಿಗೆ ಸರ್ವಸ್ವ. ಇಲ್ಲೊಬ್ಬ ಪುತ್ರ ಇಹಲೋಕ ತ್ಯಜಿಸಿದ ತನ್ನ ತಾಯಿಯ ಸ್ಮರಣಾರ್ಥ ದೇವಾಲಯವನ್ನೇ ಕಟ್ಟಿಸುತ್ತಿದ್ದಾರೆ.
ಶ್ರೀಕಾಕುಳಂನ ಶ್ರವಣ್ ಕುಮಾರ್ ಎಂಬವರೆ ತಾಯಿಗಾಗಿ ದೇವಸ್ಥಾನ ಕಟ್ಟಿಸುತ್ತಿರುವವರು. 2019ರಿಂದ ದೇವಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ನಿರ್ಮಾಣ ಕಾರ್ಯಕ್ಕಾಗಿ ಬಿಹಾರದಿಂದ ಕೆಲಸಗಾರರನ್ನು ಮತ್ತು ಶಿಲ್ಪಗಳನ್ನು ತಂದಿದ್ದಾರೆ. ಒಂದೇ ಕಲ್ಲಿನಿಂದ ತಾಯಿಯ ವಿಗ್ರಹವನ್ನು ದೇವಾಲಯದ ಒಳಗೆ ಪ್ರತಿಷ್ಠಾಪಿಸಲು ಶ್ರವಣ್ ನಿರ್ಧರಿಸಿದ್ದಾರೆ. ಇನ್ನು ತಾಯಿಯ ಬಯಕೆಯಂತೆಯೇ ಅವರು ಈ ದೇವಾಲಯ ನಿರ್ಮಿಸುತ್ತಿದ್ದಾರೆ.
ತಾಯಿಯ ಮೇಲೆ ನನ್ನ ಪ್ರೀತಿ ತುಂಬಾ ದೊಡ್ಡದು. ಆದರೆ ಕೆಲ ವರ್ಷಗಳ ಹಿಂದೆ ನನ್ನ ಪಾಲಿನ ದೇವರಾದ ತಾಯಿಯನ್ನು ನಾನು ಕಳೆದುಕೊಂಡೆ. ಅವರ ನೆನಪಿಗಾಗಿ ದೇವಸ್ಥಾನ ನಿರ್ಮಿಸುವುದು ನನ್ನ ಕನಸಾಗಿತ್ತು. ಹೀಗಾಗಿ ಒಂದೇ ಕಲ್ಲಿನಿಂದ ತಾಯಿಯ ಆರು ಅಡಿ ವಿಗ್ರಹವನ್ನು ಕೆತ್ತಲಾಗಿದೆ ಎಂದು ಮಾಧ್ಯಮಗಳಿಗೆ ಶ್ರವಣ್ ತಿಳಿಸಿದ್ದಾರೆ. ಕಾಮಗಾರಿ ಮುಗಿಯಲು ಇನ್ನು ಎರಡು ವರ್ಷ ಬೇಕಾಗಬಹುದು ಎಂಬುದು ಅವರ ಅಭಿಪ್ರಾಯ.