ನವದೆಹಲಿ, ನ 10 (DaijiworldNews/DB): ಫೇಸ್ಬುಕ್ ಸೇವೆಗಳು ಕೆಲವು ಬಳಕೆದಾರರಿಗೆ ಇಂದು ಬೆಳಗ್ಗಿನಿಂದಲೇ ಡೌನ್ ಆಗಿತ್ತು ಎಂದು ವರದಿಯಾಗಿದೆ. ವಿಶೇಷವಾಗಿ ಪ್ಲಾಟ್ಫಾರ್ಮ್ನ ಕ್ರಿಯೇಟರ್ ಸ್ಟುಡಿಯೋ ಮತ್ತು ಜಾಹೀರಾತು ವ್ಯವಸ್ಥಾಪಕ ಸೇವೆಗಳಿಗೆ ಲಾಗಿನ್ ಮಾಡುವಾಗ ಈ ಸಮಸ್ಯೆ ಉಂಟಾಗಿದೆ.
ಭಾರತೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಕೆಲವು ಬಳಕೆದಾರರಿಗೆ ಈ ಸಮಸ್ಯೆ ಎದುರಾಗಿದೆ ವೆಬ್ಸೈಟ್ ಸ್ಟೇಟಸ್ ಟ್ರ್ಯಾಕರ್ ಡೌನ್ಡೆಟೆಕ್ಟರ್ನಲ್ಲಿ ಸಮಸ್ಯೆ ಉಂಟಾಯಿತು ಎನ್ನಲಾಗಿದೆ. ನತಾಶಾ ದೇವನ್ಪೆಳ್ಳಿ ಎಂಬವರು ಈ ವಿಷಯವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದು, ಮೆಟಾ ಸಂಸ್ಥೆಗೆ ಟ್ಯಾಗ್ ಮಾಡಿದ್ದಾರೆ.
ಭಾರತದಲ್ಲಿ ಮುಂಬೈ, ದೆಹಲಿ, ಕೋಲ್ಕತ್ತಾ ಮುಂತಾದೆಡೆ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ.