ಚಿತ್ರದುರ್ಗ, ನ 07(DaijiworldNews/MS): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಶ್ರೀಗಳ ವಿರುದ್ಧ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಮುರುಘಾಶ್ರೀ, ಮಹಿಳಾ ವಾರ್ಡನ್ ರಶ್ಮಿ, ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಮಠದ ಉತ್ತರಾಧಿಕಾರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಇನ್ನುಆರ್ಥಿಕ ಸಂಕಷ್ಟದಿಂದ ಮಠ, ಹಾಸ್ಟೆಲ್ ಸೇರುತ್ತಿದ್ದ ಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದ್ದು ಬಾತ್ ರೂಂ , ಕಚೇರಿ ಕ್ಲೀನ್ ನೆಪದಲ್ಲಿ ಶ್ರೀಗಳ ಬಳಿಗೆ ಹಾಸ್ಟೆಲ್ ವಾರ್ಡನ್ ಮಕ್ಕಳನ್ನು ಕರೆದೊಯ್ಯುತ್ತಿದ್ದು ಈ ವೇಳೆ ದೌರ್ಜ್ಯನ್ಯ ಎಸಗಲಾಗುತ್ತಿತ್ತು. ೧೦ ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ಶೋಷಣೆ ಶಂಕೆ ವ್ಯಕ್ತವಾಗಿದೆ.
ಇದು ಅಲ್ಲದೆ ಮತ್ತು ಬರುವ ಔಷಧಿ ಬೆರೆಸಿ ಸೇಬು , ಚಾಕಲೇಟು ನೀಡಿ ಅತ್ಯಾಚಾರಕ್ಕೆ ಬಳಸಿಕೊಳ್ಳಲಾಗಿದೆ. ಕಚೇರಿ , ಬೆಡ್ ರೂ, ಹಾಗೂ ಬಾತ್ ರೂಂ ನಲ್ಲಿ ಮಕ್ಕಳ ಮೇಲೆ ಬಲಾತ್ಕಾರ ಮಾಡಿದ್ದು , ವಿರೋಧಿಸಿದವರಿಗೆ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ತಿಳಿದುಬಂದಿದೆ.