ನವದೆಹಲಿ, ನ 03 (DaijiworldNews/MS): ಟೆಕ್ ದೈತ್ಯ ಗೂಗಲ್ ತನ್ನ ಚಾಟಿಂಗ್ ವ್ಯವಸ್ಥೆ ಹ್ಯಾಂಗ್ಔಟ್ ಗೆ ವಿದಾಯ ಹೇಳಲಿದೆ. ಸುಮಾರು ಒಂದು ದಶಕದಿಂದ ಚಾಟಿಂಗ್ ಪ್ರಿಯರಿಗೆ ವೇದಿಕೆಯಾಗಿದ್ದ ಗೂಗಲ್ ಹ್ಯಾಂಗ್ಔಟ್ನ್ನು ಗೂಗಲ್ ಸಂಸ್ಥೆಯು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿದೆ.
ಜುಲೈನಿಂದಲೇ ಆ್ಯಂಡ್ರಾಯ್ಡ್ ಮತ್ತು ಐಒಎಸ್ಗಳಲ್ಲಿ ಈ ಆ್ಯಪ್ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಹ್ಯಾಂಗ್ಔಟ್ಸ್.ಗೂಗಲ್.ಕಾಂ ಬದಲು ಚಾಟ್.ಗೂಗಲ್.ಕಾಮ್ಗೆ ಬದಲಾಗುವಂತೆ ಗ್ರಾಹಕರಿಗೆ ಗೂಗಲ್ ಸಲಹೆ ನೀಡಿದೆ.
ಹ್ಯಾಂಗ್ಔಟ್ನಲ್ಲಿರುವ ಡೇಟಾವನ್ನು ಯೂಸರ್ಸ್ ಗೂಗಲ್ ಟೇಕ್ ಔಟ್ ಬಳಸಿಕೊಂಡು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಅಲ್ಲದೆ ಈ ತಿಂಗಳ ಅಂತ್ಯದ ತನಕ ಕೆಲ ಬಳಕೆದಾರರು ಹ್ಯಾಂಗ್ಔಟ್ ಬಳಸಿಕೊಳ್ಳುವಂತೆ ಅವಕಾಶ ನೀಡಿದೆ.