ಬೆಂಗಳೂರು, ನ 02(DaijiworldNews/MS): ಯುವ ವಿಜ್ಞಾನಿ ಎಂದು ಹೇಳುತ್ತಾ ಎಲ್ಲರನ್ನೂ ಯಾಮಾರಿಸಿ , ಸುಳ್ಳು ಹೇಳಿ ಫೇಮಸ್ ಆಗಿ ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ತಮ್ಮ ಇನ್ಶ್ಟಾ ಗಾಂ ಖಾತೆಯಲ್ಲಿ ಪೋಟೋವೊಂದನ್ನು ಹಂಚಿಕೊಂಡು ಹೊಸದಾಗಿ ಏನೋ ಪ್ರಾರಂಭಿಸುತ್ತಿರುವಂತೆ ಮುನ್ಸೂಚನೆ ನೀಡಿದ್ದಾರೆ. ಈ ಪೋಟೋ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಮಾತ್ರ ಬಗೆ ಬಗೆಯ ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ. ಈ ಬಾರಿ ಯಾವ ರಾಕೆಟ್ ಹಾರಿಸ್ತೀರಾ? ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ ? ಎಂದು ಜನ ವ್ಯಂಗ್ಯವಾಡಿದ್ದಾರೆ.
ಮಂಡ್ಯದ ಡ್ರೋನ್ ಪ್ರತಾಪ್ ಇ-ವೇಸ್ಟ್ ನಿಂದ ಡ್ರೋನ್ ತಯಾರಿಸಿದ್ದಾನೆ. ವಿದೇಶಗಳಲ್ಲಿ ಕೆಲಸದ ಅವಕಾಶಗಳು ಬಂದರೂ ದೇಶ ಬಿಟ್ಟು ಹೋಗಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಯುವ ವಿಜ್ಞಾನಿ ಹೀಗೆ ನಾನಾ ರೀತಿಯಲ್ಲಿ ಹೆಸರುವಾಸಿಯಾಗಿರುವ ಡ್ರೋನ್ ಪ್ರತಾಪ್ ಅಸಲಿಗೆ ಡ್ರೋನ್ ತಯಾರಿಸಿಯೇ ಇಲ್ಲ. ಅವನು ಹೇಳಿರುವುದೆಲ್ಲ ಸುಳ್ಳ ಕಥೆ ಎಂಬುವುದು ಬಳಿಕ ತಿಳಿದುಬಂದಿತ್ತು.