ಛತ್ತೀಸ್ಗಢ, ಅ 31 (DaijiworldNews/DB): ತನಗೆ ಕಚ್ಚಿದ ನಾಗರಹಾವನ್ನು ಬೆನ್ನಟ್ಟಿದ ಬಾಲಕನೋರ್ವ ಆ ಹಾವನ್ನು ಕಚ್ಚಿ ಸಾಯಿಸಿದ ಘಟನೆ ಛತ್ತೀಸ್ಗಢದ ಜಶ್ಪುರ ಪ್ರದೇಶದಲ್ಲಿ ನಡೆದಿದೆ. ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದಾನೆ.
ಜಶ್ಪುರ್ ಜಿಲ್ಲೆಯ ಪಂಡರ ಪಥ್ ಗ್ರಾಮದ ದೀಪಕ್ ರಾಮ್ ಎಂಬ ಬಾಲಕ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಪೊದೆಯೊಂದರಲ್ಲಿ ಅವಿತಿದ್ದ ನಾಗರಹಾವು ಆತನ ಕೈಗೆ ಕಚ್ಚಿದೆ. ಆದರೆ ಹಾವು ಕಚ್ಚಿದ್ದರಿಂದ ವಿಚಲಿತನಾಗದ ಬಾಲಕ ಕೋಪದಿಂದ ಹಾವನ್ನು ಬೆನ್ನಟ್ಟಿ ಹೋಗಿ ಹಿಡಿದಿದ್ದಾನೆ. ಬಳಿಕ ಹಾವಿನ ತಲೆಯ ಕೆಳ ಭಾಗಕ್ಕೆ ಕಚ್ಚಿದ್ದಾನೆ. ಇದರಿಂದ ಹಾವು ಸತ್ತು ಹೋಗಿದೆ.
ದೀಪಕ್ಗೆ ಹಾವು ಕಚ್ಚಿರುವ ವಿಚಾರವನ್ನು ಆತನ ಸಹೋದರ ಮನೆಯವರಿಗೆ ಮುಟ್ಟಿಸಿದ್ದು, ಕೂಡಲೇ ದೀಪಕ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಬಾಲಕ ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.