ಬೆಂಗಳೂರು, ಅ 26 (DaijiworldNews/MS): ಅಪರಾಧ ಶಾಸ್ತ್ರದಲ್ಲಿ ತನಿಖಾಧಿಕಾರಿಗಳನ್ನು ನಿರ್ದಿಷ್ಟ ದಿಕ್ಕಿಗೆ, ಕೈಹಿಡಿದು ಕರೆದೊಯ್ಯುವ ಫೋರೆನ್ಸಿಕ್ ಲ್ಯಾಬ್ ನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಕೇಂದ್ರ ಗೃಹ ಸಚಿವಾಲಯ 7 ಕೋಟಿ ರೂ. ಆರ್ಥಿಕ ನೆರವು ನೀಡಿದೆ.
ಪೊಲೀಸರು ವಶಪಡಿಸಿಕೊಂಡ ನಾರ್ಕೋಟಿಕ್ ಡ್ರಗ್ ಮಾದರಿಗಳ ಶೀಘ್ರ ಪರೀಕ್ಷೆಗೆ ಇನ್ನೆರಡು ಫೋರೆನ್ಸಿಕ್ ಲ್ಯಾಬ್ ಸ್ಥಾಪಿಸಲು ಕೇಂದ್ರ ಗೃಹ ಸಚಿವಾಲಯ ಆರ್ಥಿಕ ನೆರವು ನೀಡಿದೆ.
ಈ ವಿಚಾರವನ್ನು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು, 'ಡ್ರಗ್ ಪೆಡ್ಲರ್ಗಳನ್ನು ಶೀಘ್ರ ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಬದ್ಧವಾಗಿದೆ' ಎಂದಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದು, ಹೊಸ ಫೋರೆನ್ಸಿಕ್ ಲ್ಯಾಬ್ ತನಿಖೆಗೆ ನೆರವಾಗಲಿದೆ .