ಬೆಂಗಳೂರು, ಅ 19(DaijiworldNews/MS): ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಮತ್ತೆ ಸರ್ಕಾರಕ್ಕೆ ಮನವಿ ಮಾಡಿದೆ..
ಹಾಲಿನ ದರ ಏರಿಕೆ ಮಾಡುವಂತೆ ಕಳೆದ ತಿಂಗಳು ಕೆಎಂಎಫ್ ಸಲ್ಲಿಸಿದ್ದಪ್ರಸ್ತಾವನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರಸ್ಕರಿಸಿದ್ದರು. ಆದರೆ , ಮತ್ತೆ ದರ ಹೆಚ್ಚಳದ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ಸಹಕಾರ ಸಚಿವ ಸೋಮಶೇಖರ್ ಮಾತನಾಡಿದ್ದು, ಹಾಲಿನ ದರ ಹೆಚ್ಚಿಸಬೇಕೆಂದು 14 ಹಾಲು ಉತ್ಪಾದಕರ ಸಂಘಗಳು ಮನವಿ ಮಾಡಿವೆ. ಗ್ರಾಹಕರು ಹಾಲಿನ ದರ ಹೆಚ್ಚಿಸಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಈ ವಿಚಾರದ ಬಗ್ಗೆ ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.