ನವದೆಹಲಿ, ಅ 16 (Daijiworldnews/HR): ಖ್ಯಾತ ಜಾದೂಗಾರ ಓಂ ಪ್ರಕಾಶ್ ಶರ್ಮಾ ಅಲಿಯಾಸ್ ಓಪಿ ಶರ್ಮಾ ಅವರು ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಾದೂ ವಿದ್ಯೆಯಲ್ಲಿ ಅಂತಾರರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದ ಓಪಿ ಶರ್ಮಾ ಕಾನ್ಪುರದ ಬರ್ರಾದಲ್ಲಿರುವ ಭೂತ ಬಂಗಲೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.
ಇನ್ನು ಓಪಿ ಶರ್ಮಾ ಅವರು 34 ಸಾವಿರಕ್ಕೂ ಹೆಚ್ಚು ಶೋ ಗಳನ್ನು ನಡೆಸಿದ್ದು, ಇದೀಗ ಪತ್ನಿ, ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.