ನವದೆಹಲಿ, ಫೆ 15(MSP): ದಾಳಿಯನ್ನು ನಾವು ಮರೆಯುವುದಿಲ್ಲ, ಕ್ಷಮಿಸಲು ಸಾಧ್ಯವಿಲ್ಲ. (WE WILL NOT FORGET, WE WILL NOT FORGIVE) ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ವಂದಿಸುತ್ತೇವೆ ಮತ್ತು ಹುತಾತ್ಮ ಸಹೋದರರ ಕುಟುಂಬದೊಂದಿಗೆ ನಿಲ್ಲುತ್ತೇವೆ. ಈ ಘೋರ ದಾಳಿಗೆ ಪ್ರತೀಕಾರ ಉತ್ತರ ನೀಡಲಾಗುತ್ತದೆ ’ ಎಂದು ಸಿಆರ್ಪಿಎಫ್ ಖಡಕ್ ಟ್ವೀಟ್ ಮಾಡಿದೆ.
ರಜೆ ಮುಗಿಸಿ ಗುರುವಾರದಂದು ದೇಶ ಸೇವೆಯ ಕಾರ್ಯಕ್ಕೆ ತೆರಳುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್ ) ಯೋಧರ ಮೇಲೆ ಜಮ್ಮು-ಕಾಶ್ಮೀರಾದ ಅವಂತಿಪೋರಾದಲ್ಲಿ ಜೈಶ್- ಎ- ಮೊಹಮ್ಮದ್ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 44 ಯೋಧರು ಹುತಾತ್ಮರಾಗಿದ್ದಾರೆ. ಸಿಆರ್ಪಿಎಫ್ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಭಾರತೀಯರು ನಿಮ್ಮೊಂದಿಗೆ ನಾವಿದ್ದೇವೆ. ಉಗ್ರರನ್ನು ನಿರ್ನಾಮ ಮಾಡಿ ಎಂದು ವ್ಯಾಪಕವಾಗಿ ಬೆಂಬಲ ಸೂಚಿಸಿದ್ದಾರೆ.
ಪುಲ್ವಾಮಾ ಭಯೋತ್ಪಾದಕ ದಾಳಿಯ ಹುತಾತ್ಮರ ನೆನಪಿಗಾಗಿ, ಎಲ್ಲೆಡೆಯೂ ಸಿಆರ್ ಪಿಎಫ್ ಧ್ವಜವು ಇಂದು ಅರ್ಧ ಮಟ್ಟದಲ್ಲಿ ಹಾರುತ್ತಿದೆ.