ನವದೆಹಲಿ, ಅ 14 (DaijiworldNews/HR): ಮುಸ್ಲಿಂ ಮಹಿಳೆ ಹಿಜಾಬ್ ಧರಿಸಿ ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾರೆ. ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ಮತ್ತೆ ಹೇಳುತ್ತೇನೆ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಹಿಜಾಬ್ ನಿಷೇಧದ ಕುರಿತು ಸುಪ್ರೀಂ ಕೋರ್ಟ್ನ ವಿಭಜಿತ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಮುಸ್ಲಿಂ ಮಹಿಳೆಯರು ತಮ್ಮ ತಲೆಯನ್ನು ಮುಚ್ಚುತ್ತಾರೆ ಎಂದರೆ ಅವರು ತಮ್ಮ ಮನಸ್ಸನ್ನು ಮುಚ್ಚುತ್ತಾರೆ ಎಂದು ಅರ್ಥವಲ್ಲ ಎಂದರು.
ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ವಿದ್ಯಾರ್ಥಿಗೆ ಅವರ ಧಾರ್ಮಿಕ ಸೂಚಕಗಳೊಂದಿಗೆ ತರಗತಿಗೆ ಪ್ರವೇಶಿಸಲು ಅವಕಾಶ ನೀಡಿದಾಗ ಮತ್ತು ಒಬ್ಬ ಮುಸಲ್ಮಾನನನ್ನು ನಿಲ್ಲಿಸಿದಾಗ, ಅವರು ಮುಸ್ಲಿಂ ವಿದ್ಯಾರ್ಥಿಯ ಬಗ್ಗೆ ಏನು ಯೋಚಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.