ಮಂಗಳೂರು, ಅ 13 (DaijiworldNews/HR): ಈ ಬಾರಿ ದೀಪಾವಳಿ ಅಮಾವಾಸ್ಯೆಯ ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಹಾಗೂ ನವೆಂಬರ್ 8ರ ಹುಣ್ಣಿಮೆಯಂದು ಚಂದ್ರ ಗ್ರಹಣ ಗೋಚರಿಸಲಿದೆ.
ಅಕ್ಟೋಬರ್ 25ರ ಪಾರ್ಶ್ವ ಸೂರ್ಯ ಗ್ರಹಣವು ಸಂಜೆ ಗಂಟೆ 5.08ಕ್ಕೆ ಪ್ರಾರಂಭವಾಗಿ 6.29ಕ್ಕೆ ಅಂತ್ಯವಾಗಲಿದ್ದು, ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಗ್ರಹಣದ ಕನ್ನಡಕಗಳ ಮೂಲಕ ನೋಡಬಹುದು.
ಇನ್ನು ನವೆಂಬರ್ 8ರ ಚಂದ್ರ ಗ್ರಹಣವು ಹುಣ್ಣಿಮೆಯ ಚಂದ್ರ ಉದಯಿಸುವಾಗಲೇ ಸಂಜೆ ಗಂಟೆ 6.00ಕ್ಕೆ ಪಾರ್ಶ್ವ ಗ್ರಹಣ. ಅದೂ 19 ನಿಮಿಷ ಮಾತ್ರ. ಸಂಜೆ 6.19ಕ್ಕೆ ಗ್ರಹಣ ಮುಗಿಯುತ್ತದೆ.
ಚಂದ್ರ ಗ್ರಹಣಾನ್ನು ಬರಿಗಣ್ಣಿಂದಲೇ ನೋಡ ಬಹುದು. ಮಧ್ಯಾಹ್ನ ಗಂಟೆ 2:39ಕ್ಕೆ ಪಾರ್ಶ್ವ ಗ್ರಹಣ ಪ್ರಾರಂಭವಾಗಿ ಖಗ್ರಾಸ 3:46ಕ್ಕೆ. ಖಗ್ರಾಸ ಅಂತ್ಯ 5:11ಕ್ಕೆ. ಪಾರ್ಶ್ವ ಅಂತ್ಯ 6:19 ಆಗಲಿದೆ.