ಹಿಸಾರ್, ಅ 09 (DaijiworldNews/DB): ಗೋವಾದಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಮನೆಗೆ ೆರಡು ಅನಾಮಧೇಯ ಪತ್ರಗಳು ಬಂದಿದ್ದು, ಈ ಕುರಿತು ಕುಟುಂಬಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸೋನಾಲಿ ಕೊಲೆ ಪ್ರಕರಣದಲ್ಲಿ 10 ಕೋಟಿ ರೂ. ಡೀಲ್ ನಡೆದಿದೆ ಎಂದು ಮೊದಲ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಎರಡನೇ ಪತ್ರದಲ್ಲಿ ರಾಜಕೀಯ ಮುಖಂಡರ ಹೆಸರನ್ನು ನಮೂದು ಮಾಡಲಾಗಿದೆ. ಮೊದಲ ಪತ್ರ ತಿಂಗಳ ಹಿಂದೆ ಬಂದಿದ್ದರೆ ಇನ್ನೊಂದು ಪತ್ರ ಕೆಲವು ದಿನಗಳ ಹಿಂದೆ ಬಂದಿತ್ತು ಎಂದು ಸೋನಾಲಿ ಸೋದರ ಮಾವ ಅಮನ್ ಪೂನಿಯಾ ಹೇಳಿದ್ದಾರೆ. ಮಹತ್ವದ ಮಾಹಿತಿಗಳನ್ನು ಎರಡೂ ಪತ್ರಗಳು ಹೊಂದಿವೆ. ಹೀಗಾಗಿ ಈ ಕುರಿತು ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಸೋನಾಲಿ ಸಹೋದರಿ ರುಕೇಶ್ ಆದಂಪುರದಿಂದ ಚುನಾವಣೆಗೆ ಸ್ಪರ್ಧೆ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷದೊಂದಿಗೆ ನಮಗೆ ಯಾವ ಸಂಬಂಧವೂ ಇಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.