ಮಂಡ್ಯ, ಅ 06(DaijiworldNews/MS): ಆಯುಧ ಪೂಜೆ ಹಾಗೂ ವಿಜಯದಶಮಿಯ ಹಿನ್ನಲೆ ಎರಡು ದಿನಗಳ ವಿರಾಮದ ನಂತರ ಗುರುವಾರದಿಂದ ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಆರಂಭವಾಗಿದೆ.
ಇಂದು ಬೆಳಗ್ಗೆ ಪಾಂಡವಪರದ ಬೆಳ್ಳಾರೆ ಗ್ರಾಮದ ಬಳಿ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯ ನ್ಯಾಮನಹಳ್ಳಿ ಬಳಿ ಸೋನಿಯಾಗಾಂಧಿ ಪಾದಯಾತ್ರೆ ಗೆ ಸಾಥ್ ನೀಡಿದ್ದಾರೆ. ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ ೧೨.೩೦ಕ್ಕೆ ದೆಹಲಿಗೆ ವಾಪಸ್ಸಾಗಲಿದ್ದಾರೆ.
ಜೋಡೋ ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಸಾಥ್ ನೀಡಿದ್ದಾರೆ. ಹೀಗಾಗಿ ಬಿಗ್ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಅಕ್ಟೋಬರ್ 3 ರಂದು ಐಕ್ಯತಾ ಯಾತ್ರೆ ಮೈಸೂರಿನ ಕಳಸ್ತವಾಡಿಯಿಂದ ಶ್ರೀರಂಗಪಟ್ಟಣ, ಕಿರಂಗೂರು ಮಾರ್ಗವಾಗಿ ಪಾಂಡವಪುರ ತಾಲೂಕಿನ ಕಿನ್ನಾಳು ಗ್ರಾಮವನ್ನು ತಲುಪಿತ್ತು. ಬಳಿಕ, ರಾಹುಲ್ ಗಾಂಧಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಕಬಿನಿ ಹಿನ್ನಿರು ಬಳಿ ಇರುವ ಆರೆಂಜ್ ಕೌಂಟಿ ರೆಸಾರ್ಟ್ ಗೆ ತೆರಳಿ, ತಾಯಿ ಸೋನಿಯಾ ಜೊತೆಗೆ ವಿಶ್ರಾಂತಿ ಪಡೆದಿದ್ದರು.