ನವದೆಹಲಿ, ಅ 05 (DaijiworldNews/MS): ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಬುಧವಾರ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಬಳಿ ಪತನಗೊಂಡಿದೆ.
ಅಪಘಾತದಲ್ಲಿ ಓರ್ವ ಪೈಲಟ್ ಮೃತಪಟ್ಟಿದ್ದು, ಇತರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸೇನಾ ಅಧಿಕಾರಿಗಳು ಎಎನ್ಐಗೆ ತಿಳಿಸಿದ್ದಾರೆ.