ಕಲಬುರ್ಗಿ, ಅ 04 (DaijiworldNews/MS): "ನಾನು ಪಾಲಿಸುವ ತತ್ವ, ಸಿದ್ಧಾಂತ ಬೆಂಬಲಿಸುವವರು ನನ್ನ ಪರವಾಗಿ ನಿಲ್ಲುತ್ತಾರೆ" ಎಂಬುದಾಗಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಇಂದುಮಾಧ್ಯಮದೊಂದಿಗೆ ಮಾತನಾಡಿದಂತ ಅವರು, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಎಲ್ಲರಿಗೂ ಇದೆ. ರಾಹುಲ್, ಪ್ರಿಯಾಂಕಾ ಗಾಂಧಿ ಅಧ್ಯಕ್ಷರಾಗಲು ಒಪ್ಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ನಾನು ಎಲ್ಲರ ಒತ್ತಾಯದ ಮೇರೆಗೆ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿದ್ದ ಬಡತನ ನಿರ್ಮೂಲನೆ ಮಾಡಲು ನೆಹರು ಪ್ರಯತ್ನ ಮಾಡಿದ್ದರು. ಆದರೆ ಇಂದು ಬಿಜೆಪಿ ,ಆರ್ ಎಸ್ ಎಸ್ ಬಡತನವನ್ನು ಬೆಳೆಸುತ್ತಿದೆ ಎಂಬುದಾಗಿ ಆರೋಪಿಸಿದರು
ಕಲಬುರ್ಗಿಗೆ ಒಂದು ಅವಕಾಶ ಸಿಕ್ಕಿದೆ. ಮುಂದೆ ಏನ್ ಆಗುತ್ತೋ ಎಂಬುದನ್ನು ಕಾದು ನೋಡೋಣ ಎಂದರು.