ಬೆಂಗಳೂರು,ಫೆ 13 (MSP): ನನ್ನ ಸದ್ಯದ ಪರಿಸ್ಥಿತಿ ರೇಪ್ ಗೆ ಒಳಗಾದವರ ಪರಿಸ್ಥಿತಿಯಂತಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಳವಳ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಆಡಿಯೋ ಮೇಲಿನ ಚರ್ಚೆಯ ಸಂದರ್ಭ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಮಾತನಾಡುತ್ತಾ , ಸ್ಪೀಕರ್ ಅವರನ್ನು ಸಿಎಂ ಬೀದಿಗೆ ತಂದಿದ್ದಾರೆಂದು ಆರೋಪಿಸಿದರು. ಆದ ಸ್ಪೀಕರ್ ಅತ್ಯಾಚಾರಕ್ಕೆ ಒಳಗಾದವರು ದೂರು ಕೊಟ್ಟ ನಂತರ ಕೋರ್ಟ್ ಗೆ ಹೋದರೆ ಅಲ್ಲಿನ ವಕೀಲರು, ಎಲ್ಲಿ ಆಯಿತು, ಹೇಗೆ ಆಯಿತು?ಎಷ್ಟು ಹೊತ್ತಿಗೆ ಆಯಿತು? ಎಂದು ಪದೇ ಪದೇ ಕೇಳುತ್ತಾರೆ.ಅದೇ ರೀತಿ ನೀವೆಲ್ಲಾ ನನ್ನ ರೇಪ್ ಮಾಡುತ್ತಿದ್ದೀರಿ. ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆಯಂತಾಗಿದೆ ನನ್ನ ಕಥೆ.
ಟೇಪ್ನಲ್ಲಿ ಒಮ್ಮೆ ಹೆಸರು ಹೇಳಿ ಅತ್ಯಾಚಾರ ಮಾಡಿದವನು ಹೊರಗೆ ಹೋಗಿದ್ದಾನೆ. ಈಗ , ನೀವು ಎರಡೂ ಕಡೆಯವರು ನೀವು ಹಣ ಪಡೆದಿದ್ದೀರಿ, ಹಣ ಪಡೆದಿದ್ದೀರಿ ಎಂದು ಪದೇ ಪದೆ ಪ್ರಸ್ತಾಪ ಮಾಡುತ್ತಿರುವುದರಿಂದ , ಒಬ್ಬ ವ್ಯಕ್ತಿ ಮೇಲೆ 1 ಬಾರಿ ರೇಪ್ ಆಗಿದ್ದರೆ , ಕೋರ್ಟ್ ನಲ್ಲಿ ೧೦೦ ಬಾರಿ ಆದ ಅನುಭವ ಆಗುತ್ತದೆ.ನನ್ನ ಪರಿಸ್ಥಿತಿಯೂ ಆಗಿದೆ' ಎಂದು ಹೇಳಿದಾಗ ಸದನದಲ್ಲಿ ನಗೆಯ ಅಲೆ ಉಕ್ಕಿತು.