ಬೆಂಗಳೂರು, ಅ 04 (DaijiworldNews/MS): "ಚಡ್ಡಿಗಳೇ ಎಚ್ಚರ - ನಾವು ಮತ್ತೆ ಬರುತ್ತೇವೆ" ಎಂದು ಬರಹದ ಕುರಿತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ಬರೆದವರು ಹೇಡಿಗಳು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಯಾರಿಂದಲೂ ಏನೂ ಮಾಡಲಾಗಲ್ಲ. ಸಂಘ ಪರಿವಾರದವರಿಗೆ , ಅವರಪ್ಪನಿಂದಲೂ ಬುದ್ದಿ ಕಲಿಸಲು ಸಾಧ್ಯವಿಲ್ಲ. ದೇಶದ್ರೋಹಿ ಸಂಘಟನೆ ಪಿಎಫ್ ಐ ನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದಕ್ಕೆ ಕಾಂಗ್ರೆಸ್ ಹಾಗೂ ಮುಸ್ಲಿಂ ನಾಯಕರು ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು, ಈ ರೀತಿ ಬರಹ ಬರೆದವರು ಹೇಡಿಗಳು ಎಂದು ಕಿಡಿಕಾರಿದ್ದಾರೆ.
ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಬಳಿಯ ನೈನಾಡು ಎಂಬಲ್ಲಿ ರಸ್ತೆಯಲ್ಲಿ "ಚಡ್ಡಿಗಳೇ ಎಚ್ಚರ - ಪಿಎಫ್ ಐ ನಾವು ಮತ್ತೆ ಬರುತ್ತೇವೆ " ಎಂಬ ಬರಹ ಬರೆಯಲಾಗಿದೆ. ತಡರಾತ್ರಿ ಕಿಡಿಗೇಡಿಗಳು ಈ ಬರಹವನ್ನು ಬರೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಪೂಂಜಾಲಕಟ್ಟೆ ಪೊಲೀಸರ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಿಎಫ್ ಐ ನಾವು ಮತ್ತೆ ಬರುತ್ತೇವೆ ಎಂಬ ಬರಹದ ಮೂಲಕ ಮತ್ತೆ ಮರಳುವ ಬಗ್ಗೆ ಮಾತನಾಡಿದ್ದಾರೆ. ಈ ಬರಹ ಬರೆದವರು ಸ್ಥಳೀಯರಾ? ಬೇರೆ ಭಾಗದವರು ಇಲ್ಲಿಗೆ ಬಂದು ಈ ರೀತಿ ಬರೆದು ಹೋಗಿದ್ದೀರಾ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.