ಪಾಟ್ನಾ, ಅ 04 (DaijiworldNews/DB): ಪ್ರಶಾಂತ್ ಕಿಶೋರ್ ಅವರು ಬಿಹಾರದ ಜನತೆಗಾಗಿ ಏನೂ ಮಾಡಿಲ್ಲ. ಬದಲಾಗಿ ಅವರು ಬಿಜೆಪಿ ಪರ ಕೆಲಸ ಮಾಡುತ್ತಿದ್ದರು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಆರೋಪ ಮಾಡಿದ್ದಾರೆ. ಇನ್ನು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಅವರೂ ಕೂಡಾ ಪ್ರಶಾಂತ್ ಕಿಶೋರ್ ಅವರ ವಿರುದ್ದ ಹರಿಹಾಯ್ದಿದ್ದು, ಬಿಹಾರದಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ನಮಗೆ ಪ್ರಶಾಂತ್ ಕಿಶೋರ್ ಅವರಿಂದ ಪ್ರಮಾಣಪತ್ರ ಅಗತ್ಯವಿಲ್ಲ. ಅದೆಲ್ಲವೂ ಬಿಹಾರದ ಜನತೆಗೆ ಗೊತ್ತಿದೆ. ನಿತೀಶ್ಕುಮಾರ್ ಕಾರ್ಯವೈಖರಿಯನ್ನು ಜನ ತಿಳಿದುಕೊಂಡಿದ್ದಾರೆ ಎಂದರು.
ಪಾದಯಾತ್ರೆ ಮಾಡಲು ಹೊರಟಿರುವ ಪ್ರಶಾಂತ್ ಕಿಶೋರ್ ಅವರು ಅದಕ್ಕೆ ಏನು ಹೆಸರಿಡುತ್ತಾರೋ ಇಟ್ಟುಕೊಳ್ಳಲಿ. ಆದರೆ ಅವರು ಬಿಜೆಪಿ ಪರ ಕೆಲಸ ಮಾಡುತ್ತಿರುವುದು ಸ್ಪಷ್ಟ ಎಂದವರು ಟೀಕಿಸಿದರು.