ಮುಂಬೈ, ಅ 4 (DaijiworldNews/HR): ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ತಂದು ಮಧ್ಯಪ್ರದೇಶದಿಂದ ತಂದು ಬಿಡಲಾದ ಚೀತಾಗಳೇ ದೇಶದಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಲಂಪಿ ವೈರಸ್ (ಚರ್ಮ ಗಂಟು) ರೋಗಕ್ಕೆ ಕಾರಣ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ನಾಶಮಾಡಲು ಮೊಟ್ಟಮೊದಲ ಬಾರಿಗೆ ಲಂಪಿ ವೈರಸ್ನಂತಹ ರೋಗಗಳನ್ನು ಭಾರತಕ್ಕೆ ತರಲಾಗಿದ್ದು, ನೈಜೀರಿಯಾದಿಂದ ಲಂಪಿ ವೈರಸ್ ರೋಗ ಹರಡುತ್ತಿದೆ. ನಾವು ನೈಜೀರಿಯಾದಿಂದ ಚಿರತೆಗಳನ್ನು ತಂದಿದ್ದೇವೆ ಎಂದರು.
ಇನ್ನು ಅವರ ಹೇಳಿಕೆ ಒಂದೆಡೆ ರಾಜಕೀಯ ನಾಯಕರ ಟೀಕೆಗೆ ಗುರಿಯಾಗಿದ್ದರೆ ಮತ್ತೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಗಿದೆ.