ನವದೆಹಲಿ, ಅ 03 (DaijiworldNews/DB): ಪತಿಯ ಸಂಬಳದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಮಹಿಳೆಯೊಬ್ಬಳು ಆರ್ಟಿಐ ಮೊರೆ ಹೋದ ಪ್ರಸಂಗ ನಡೆದಿದೆ. ಮಹಿಳೆಯ ಅರ್ಜಿಗೆ ಸಮ್ಮತಿಯೂ ಸಿಕ್ಕಿದ್ದು, ಮುಂದಿನ 15 ದಿನಗಳಲ್ಲಿ ಆಕೆ ಪತಿಯ ಸಂಬಳದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾಳೆ.
ಸಂಜು ಗುಪ್ತಾ ಎಂಬಾಕೆಯ ಪತಿಯ ಸಂಬಳ ಎಷ್ಟಿದೆ ಎಂದು ತಿಳಿದುಕೊಳ್ಳಲು ಆರ್ಟಿಐ ಮೊರೆ ಹೋದಾಕೆ. ಸಂಜು ಗುಪ್ತಾಳ ಪತಿ ಆಕೆಗೆ ತನ್ನ ಸಂಬಳ ಎಷ್ಟಿದೆ ಎಂದು ಹೇಳಲು ನಿರಾಕರಿಸಿದ್ದಾನೆ. ಆದರೆ ಅವರಿಬ್ಬರ ನಡುವೆ ಶೀಘ್ರದಲ್ಲೇ ವಿಚ್ಛೇದನವೂ ಆಗಲಿತ್ತು ಎಂದು ವರದಿಗಳು ತಿಳಿಸಿವೆ.
ಪರಸ್ಪರ ಒಪ್ಪಿಗೆಯಿಲ್ಲದೆ ವಿಚ್ಛೇದನ ಪಡೆದುಕೊಂಡ ಸಂದರ್ಭದಲ್ಲಿ ಪತಿಯ ಆದಾಯದ ಬಗ್ಗೆ ಪತ್ನಿ ಮಾಹಿತಿ ಪಡೆದುಕೊಳ್ಳಬಹುದು ಮತ್ತು ಜೀವನಾಂಶವನ್ನೂ ಕೇಳಬಹುದು. ಆದರೆ ಈ ಬಗ್ಗೆ ಆತ ನಿರಾಕರಿಸಿದರೆ ಪತ್ನಿ ಅದನ್ನು ಬೇರೆ ರೀತಿಯಲ್ಲಿ ಕಂಡು ಹಿಡಿಯಲು ಅವಕಾಶವಿದೆ. ಹೀಗಾಗಿ ಆಕೆ ತನ್ನ ಪತಿಯ ಸಂಬಳದ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾಳೆ.
ಮಹಿಳೆಗೆ ಆಕೆಯ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು ಮುಂದಿನ 15 ದಿನಗಳೊಳಗೆ ನೀಡುವಂತೆ ಆದಾಯ ತೆರಿಗೆ ಇಲಾಖೆಗೆ ಕೇಂದ್ರೀಯ ಮಾಹಿತಿ ಆಯೋಗವು ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ಒತಿ ಈ ಮಾಹಿತಿ ನೀಡಲು ನಿರಾಕರಿಸಿದ್ದರು. ಆದರೆ ಕೊನೆಗೆ ಮುಚ್ಚಿಡುವುದು ಆತನಿಂದ ಸಾಧ್ಯವಾಗಲಿಲ್ಲ ಎನ್ನಲಾಗಿದೆ.