ನವದೆಹಲಿ, ಅ 02 (DaijiworldNews/HR): ಬಹುವಿಧದ ಪಾತ್ರ ವಹಿಸುವ ಸಾಮರ್ಥ್ಯದ ಲಘು ಯುದ್ಧ ಹೆಲಿಕಾಪ್ಟರ್ಗಳನ್ನು (ಎಲ್ಸಿಎಚ್) ಭಾರತೀಯ ವಾಯುಪಡೆಯು ಸೋಮವಾರ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಿದೆ.
ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಈ ಲಘು ಯುದ್ಧ ಹೆಲಿಕಾಪ್ಟರ್ಗಳನ್ನು ಸಂಪೂರ್ಣ ದೇಶಿಯ ತಂತ್ರಜ್ಞಾನದಲ್ಲಿ ನಿರ್ಮಿಸಿದೆ.
ಇನ್ನು ಎರಡು ಎಂಜಿನ್ಗಳನ್ನು ಹೊಂದಿರುವ 5.8 ಟನ್ ತೂಕದ ಹೆಲಿಕಾಪ್ಟರ್ ಈಗಾಗಲೇ ಕ್ಷಿಪಣಿಗಳು ಮತ್ತು ವಿವಿಧ ಶಸ್ತ್ರಾಸ್ತ್ರಗಳನ್ನು ಹಾರಿಸುವ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಹೆಲಿಕಾಪ್ಟರ್ 20 ಎಂಎಂ ಟರೆಂಟ್ ಗನ್ ಮತ್ತು 70 ಎಂಎಂ ಕ್ಷಿಪಣಿಗಳನ್ನು ಸಿಡಿಸಲಿದೆ. ಇವುಗಳ ಪರೀಕ್ಷೆ ಕಳೆದ ವರ್ಷ ನಡೆದಿತ್ತು. ಈ ಹೆಲಿಕಾಪ್ಟರ್ನ ಮತ್ತೊಂದು ವಿಶೇಷತೆ ಎಂದರೆ, ಸಿಯಾಚಿನ್ನಂತಹ ಅತಿ ಎತ್ತರ ನೀರ್ಗಲ್ಲು ಪ್ರದೇಶದಲ್ಲೂ, ಮರುಭೂಮಿಯಲ್ಲೂ ಸಮರ್ಥ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್)ಯು 3,887 ಕೋಟಿ ವೆಚ್ಚದಲ್ಲಿ ಸೀಮಿತ ಸರಣಿ ಉತ್ಪಾದನೆಯ 15 ಎಲ್ಸಿಎಚ್ಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ಮಾರ್ಚ್ನಲ್ಲಿ ಅನುಮೋದನೆ ನೀಡಿತ್ತು.