ನವದೆಹಲಿ, ಅ 02 (DaijiworldNews/HR): ಇಬ್ಬರು ದುಷ್ಕರ್ಮಿಗಳು ಆರು ವರ್ಷದ ಬಾಲಕನನ್ನು ನರಬಲಿಯಾಗಿ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಿಹಾರ ಮೂಲದ ಆರೋಪಿಗಲಾದ ವಿಜಯ್ ಕುಮಾರ್ ಮತ್ತು ಅಮರ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಆರೋಪಿಗಳು ಮತ್ತು ಬಾಲಕನ ಪೋಷಕರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ವಿಜಯ್ ಮತ್ತು ಅಮರ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಬಾಲಕ ಶನಿವಾರ ರಾತ್ರಿ ತನ್ನ ಶೆಡ್ಗೆ ಹೋಗುತ್ತಿದ್ದಾಗ, ಆರೋಪಿಗಳು ಅವರನ್ನು ತಮ್ಮ ಅಡುಗೆ ಸ್ಥಳಕ್ಕೆ ಕರೆದು ಮೊದಲು ತಲೆಯ ಮೇಲೆ ಹಲ್ಲೆ ನಡೆಸಿ ನಂತರ ಕತ್ತು ಸೀಳಿ ಕೊಂದಿದ್ದಾರೆ.