ಚೆನ್ನೈ, ಅ 01 (DaijiworldNews/HR): ಭಾರತೀಯ ಕಮ್ಯುನಿಸ್ಟ್ ಪಕ್ಷದ ಕೇರಳ ರಾಜ್ಯ ಕಾರ್ಯದರ್ಶಿ ಮತ್ತು ಪಾಲಿಟ್ ಬ್ಯೂರೋ ಸದಸ್ಯ ಕೊಡಿಯೇರಿ ಬಾಲಕೃಷ್ಣನ್ (69) ಶನಿವಾರ ನಿಧನರಾಗಿದ್ದಾರೆ.
ಬಾಲಕೃಷ್ಣನ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಇನ್ನು ಬಾಲಕೃಷ್ಣನ್ ಅವರು 2015 ರಿಂದ 2022 ರವರೆಗೆ ಸಿಪಿಐಎಂನ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, 2006ರಿಂದ 2011ರವರೆಗೆ ವಿ ಎಸ್ ಅಚ್ಯುತಾನಂದನ್ ಸರ್ಕಾರದಲ್ಲಿ ಅನೇಕ ಬಾರಿ ಶಾಸಕರಾಗಿದ್ದರು ಮತ್ತು ಗೃಹ ಮತ್ತು ಪ್ರವಾಸೋದ್ಯಮ ವ್ಯವಹಾರಗಳ ಸಚಿವರಾಗಿದ್ದರು.