ನವದೆಹಲಿ, ಅ 01 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸದಸ್ಯರು ದೇಶಭಕ್ತರಲ್ಲ, ಅವರು ಕಳ್ಳರು ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೋ ಯಾತ್ರಯಲ್ಲಿ 40% ಕಮಿಷನ್ ಭ್ರಷ್ಟಾಚಾರ ಆರೋಪದ ಕುರಿತು ವಾಗ್ದಾಳಿ ನಡೆಸಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್ಪಿಜಿ 400 ರೂ.ಗಳಷ್ಟಿತ್ತು, ಈಗ ಅದು 1,000 ರೂ.ಗೆ ತಲುಪಿದೆ. ಈ ಹೆಚ್ಚುವರಿ 600 ರೂ.ಗಳನ್ನು ಯಾರು ಪಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಪ್ರಧಾನ ಮಂತ್ರಿ ನರೆಂದ್ರ ಮೋದಿ ಮತ್ತು ಬಿಜೆಪಿ ಸದಸ್ಯರು ದೇಶಭಕ್ತರಲ್ಲ, ಅವರೆಲ್ಲರು 'ಕಳ್ಳರು' ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.