ಉತ್ತರಾಖಂಡ್, ಅ 01 (DaijiworldNews/HR): ಮನುಷ್ಯನ ಜಾತನಕದಲ್ಲಿ ಅನೇಕ ದೋಷಗಳಿರುತ್ತದೆ ಅದರಂತೆ ಒಂದು ವೇಳೆ ನಮ್ಮ ಜಾತಕದಲ್ಲಿ ಬಂಧನದ ದೋಷವಿದ್ದರೆ ಅದಕ್ಕೆ ಪರಿಹಾರವಾಗಿ ಉತ್ತರಾಖಂಡದಲ್ಲಿ ಬಾಡಿಗೆ ರೂಪದಲ್ಲಿ ವಿಶೇಷವಾದ ಜೈಲ್ಲೊಂದಿದೆ.
ಜಾತಕದಲ್ಲಿ ನೀವು ಜೈಲು ಸೇರುತ್ತೀರಿ ಅಥವಾ ಬಂಧನವಾಗುವ ಸಾಧ್ಯತೆಯಿದ್ದರೆ ನಿಮ್ಮ ಜೈಲಿನ ದೋಷಕ್ಕೆ ಪರಿಹಾರವಾಗಿ ಒಂದು ದಿನಕ್ಕೆ ಬಾಡಿಗೆ ರೂಪದಲ್ಲಿ 500 ರೂ. ಕೊಟ್ಟು ಜೈಲುಶಿಕ್ಷೆ ಅನುಭವಿಸಬಹುದಾಗಿದೆ.
ಇನ್ನು ಉತ್ತರಾಖಂಡದ ಹಲ್ದ್ವಾನಿ ಜೈಲು ಈ ದೋಷವನ್ನು ಪರಿಹರಿಸಿಕೊಳ್ಳಲು ಅವಕಾಶ ನೀಡಿದ್ದು, ಈ ರೀತಿ ಬಾಡಿಗೆ ಕೊಟ್ಟು ಜೈಲಿನಲ್ಲಿರಲು ಅವಕಾಶ ನೀಡಿದ ದೇಶದ ಮೊದಲ ಜೈಲು ಇದಾಗಿದೆ.