ಪಂಜಾಬ್, ಅ 01 (DaijiworldNews/DB): ಸಾಕುನಾಯಿಯೊಂದು 12 ಮಂದಿಯ ಮೇಲೆ ಅಟ್ಯಾಕ್ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಪಂಜಾಬ್ನ ಗುರುದಾಸ್ಪುರದಲ್ಲಿ ನಡೆದಿದೆ.
ಪಿಟ್ಟುಲ್ ಎಂಬ ಸಾಕು ನಾಯಿಯು ಪಂಜಾಬ್ನ ಟ್ಯಾಂಗೋ ಷಾ ಗ್ರಾಮದಿಂದ ಚುಹಾನ್ ಗ್ರಾಮದವರೆಗೆ ಸುಮಾರು 15 ಕಿ.ಮೀ ದೂರದವರೆಗೆ ನಡೆದುಕೊಂಡು ಹೋಗುವವರ ಮೇಲೆ ದಾಳಿ ನಡೆಸಿ೮ದೆ. ನಿವೃತ್ತ ಸೈನಿಕರೊಬ್ಬರ ಮೇಲೆಯೂ ದಾಳಿ ನಡೆಸಿದ್ದು, ಅವರು ಆತ್ಮರಕ್ಷಣೆಗಾಗಿ ನಾಯಿಯನ್ನು ಕೊಂದಿದ್ದಾರೆಂದು ತಿಳಿದು ಬಂದಿದೆ.
ಟ್ಯಾಂಗೋ ಷಾ ಗ್ರಾಮದ ಬಳಿ ಇಬ್ಬರಿಗೆ ಕಚ್ಚಿದ ನಾಯಿಯನ್ನು ಕುತ್ತಿಗೆ ಸರಪಳಿ ಹಿಡಿದು ಎಸೆಯುವ ಮೂಲಕ ಇಬ್ಬರೂ ತಮ್ಮನ್ನು ರಕ್ಷಿಸಿಕೊಂಡರು. ಬಳಿಕ ಅಲ್ಲಿಂದ ಓಟಕ್ಕಿತ್ತ ನಾಯಿ ಹಳ್ಳಿಯೊಂದನ್ನು ಪ್ರವೇಶಿಸಿ ಅಲ್ಲಿಯೂ ಕೆಲವರಿಗೆ ಕಚ್ಚಿ ಗಾಯಗೊಳಿಸಿದೆ.
ಇನ್ನು ತಮ್ಮ ನಿವಾಸದೆದುರು ಕುಳಿತಿದ್ದ ದಿಲೀಪ್ ಕುಮಾರ್ ಎಂಬವವರೊಬ್ಬರನ್ನು ಕಚ್ಚಿದ ನಾಯಿಯನ್ನು ಅವರು ಕುತ್ತಿಗೆಯಿಂದ ಹಿಡಿದು ನಿಲ್ಲಿಸಲು ಪ್ರಯತ್ನಿಸಿದರಾದರೂ, ಅವರನ್ನು ಕೆಲವು ಮೀಟರ್ಗಳಷ್ಟು ದೂರ ಎಳೆದುಕೊಂಡು ಹೋಗಿದೆ. ಇದರಿಂದ ಅವರಿಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು. ಬಳಿಕ ನಿವೃತ್ತ ಸೈನಿಕರೊಬ್ಬರ ಮೇಲೆ ನಾಯಿ ಧಾಳಿ ನಡೆಸಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಅವರು ನಾಯಿಯನ್ನು ಕೊಂದಿದ್ದಾರೆಂದು ವರದಿಯಾಗಿದೆ.