ನವದೆಹಲಿ, ಅ 01 (DaijiworldNews/MS): ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ.
ಕೆಲವೊಂದುಕಾನೂನಾತ್ಮಕ ಕಾರಣಗಳಿಗೆ ಈ ಕ್ರಿಯೆ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟರ್ ಖಾತೆ ತೋರಿಸುತ್ತದೆ.
ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ವಿರುದ್ಧ ಕ್ರಮಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರಸ್ತುತ, ಯಾವುದೇ ಟ್ವೀಟ್ ಅನ್ನು ಭಾರತೀಯರು ನೋಡಲಾಗುವುದಿಲ್ಲ. ಟ್ವಿಟರ್ ಖಾತೆ ಪಾಕಿಸ್ತಾನ ಸರ್ಕಾರ @GovtofPakitan ಆಗಿದೆ. ಯಾರಾದರೂ ಈ ಟ್ವಿಟರ್ ಖಾತೆಯನ್ನು ತೆರೆಯಲು ಪ್ರಯತ್ನಿಸಿದರೆ, ಅಲ್ಲಿ ತಡೆಹಿಡಿಯಲಾದ ಖಾತೆಯ ಸಂದೇಶವನ್ನು ಕಂಡುಕೊಳ್ಳುತ್ತಾರೆ.
"ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ @GovtofPakistan ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ" ಎಂದು ಟ್ವಿಟರ್ನಲ್ಲಿ ಸಂದೇಶವನ್ನು ತಿಳಿಸಿದೆ.