ನವದೆಹಲಿ, ಅ 01 (DaijiworldNews/MS): ರಾಷ್ಟ್ರ ರಾಜಧಾನಿಯ ಸೆಂಟ್ರಲ್ ವಿಸ್ತಾ ಕಟ್ಟಡದ ಮೇಲೆ ನೂತನವಾಗಿ ಸ್ಥಾಪಿಸಲಾದ ರಾಷ್ಟ್ರೀಯ ಲಾಂಛನವು 2005ರ ಭಾರತದ ಲಾಂಛನ(ಅಸಮರ್ಪಕ ಬಳಕೆ ನಿಷೇಧ) ಕಾಯ್ದೆಯನ್ನು ಉಲ್ಲಂಘಿ ಸಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರನ್ನುಒಳಗೊಂಡ ನ್ಯಾಯಪೀಠ, ಅನಿಸಿಕೆಯು ವ್ಯಕ್ತಿಯ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ಕಾಯ್ದೆಯ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿತು.
ವಕೀಲರಾದ ಅಲ್ದಾನೀಶ್ ರೇನ್ ಮತ್ತು ರಮೇಶ್ ಕುಮಾರ್ ಮಿಶ್ರಾ ಅವರು ಸಲ್ಲಿಸಿದ ಅರ್ಜಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಲಾಂಛನದಲ್ಲಿ ಸಿಂಹಗಳನ್ನು ಚಿತ್ರಿಸಲಾಗಿದ್ದು, ರಾಜ್ಯ ಲಾಂಛನಕ್ಕೆ ವ್ಯತಿರಿಕ್ತವಾಗಿ ಅವುಗಳ "ಬಾಯಿ ತೆರೆದು ಕೋರೆಹಲ್ಲು ಗೋಚರಿಸುವ" "ಉಗ್ರ ಮತ್ತು ಆಕ್ರಮಣಕಾರಿ" ಎಂದು ತೋರುತ್ತಿದೆ. ಸಾರನಾಥ ವಸ್ತುಸಂಗ್ರಹಾಲಯದಲ್ಲಿ, ಸಿಂಹಗಳು "ಶಾಂತ ಮತ್ತು ಸಂಯೋಜನೆ" ಯಲ್ಲಿ ಕಂಡುಬರುತ್ತವೆ ಎಂದು ಆರೋಪಿಸಿ ಇಬ್ಬರು ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.