ನವದೆಹಲಿ, ಸೆ.30 (DaijiworldNews/HR): ಕಾಂಗ್ರೆಸ್ ಭೀಷ್ಮ ಪಿತಾಮಹ, ಅವರಿಗೆ ಅಗೌರವವಿಲ್ಲ, ನನ್ನ ಆಲೋಚನೆಗಳನ್ನು ನಾನು ಪ್ರತಿನಿಧಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಸ್ಪರ್ಧೆ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಶಶಿ ತರೂರ್ ಅವರು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಚುನಾವಣೆಯಿಂದ ಹಿಂದೆ ಸರಿಯುವುದನ್ನು ತಳ್ಳಿಹಾಕಿದ್ದಾರೆ.
ಇನ್ನು ಭಾರತದ ಯುವ ಜನತೆ ಮತ್ತು ದೇಶದ ಭವಿಷ್ಯದ ಕುರಿತ ಚುನಾವಣೆ ಇದಾಗಿದ್ದು, ಕಾಂಗ್ರೆಸ್ ಬದಲಾವಣೆಗಾಗಿ ಪಕ್ಷವಾಗಬೇಕು. ನಾವು ಪಕ್ಷವನ್ನು ಬಲಪಡಿಸುತ್ತೇವೆ ಮತ್ತು ದೇಶವನ್ನು ಮುನ್ನಡೆಸುತ್ತೇವೆ ಎಂದು ಹೇಳಿದ್ದಾರೆ.