ಲಕ್ನೋ, ಸೆ.30 (DaijiworldNews/HR): ಉತ್ತರ ಪ್ರದೇಶದ ಆಮ್ರೋಹ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಕಚೇರಿಗೆ ಹಾಜರಾಗದೇ ಸಂಬಳ ಪಡೆಯುತ್ತಿದ್ದ ಡೆಪ್ಯುಟಿ ಸಿಎಂಒ(ಚೀಫ್ ಮೆಡಿಕಲ್ ಆಫೀಸರ್) ಡಾ.ಇಂದೂ ಬಾಲಾ ಶರ್ಮಾ ಅವರನ್ನು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಕಳೆದ ಆರು ತಿಂಗಳಿನಿಂದ ಬಾಲಾ ಶರ್ಮಾ ಅವರು ಕಚೇರಿಗೆ ಹಾಜರಾಗದೇ ಹಾಜರಾತಿ ಪುಸ್ತಕದಲ್ಲಿ ನಕಲಿ ಸಹಿ ಹಾಕಿ ಸಂಬಳ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಒ ಸಂಜಯ್ ಅಗರ್ವಾಲ್ ಅವರು ಇಲಾಖಾ ತನಿಖೆಗೆ ಆದೇಶ ನೀಡಿದ್ದು, ಈ ಪ್ರಕರಣದಲ್ಲಿ ಶಾಮೀಲಾದ ಎಲ್ಲಾ ಉದ್ಯೋಗಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ಎಫ್ಐಆರ್ ದಾಖಲಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದರು.