ನವದೆಹಲಿ, ಸೆ 30 (DaijiworldNews/MS): ಅಮೇರಿಕಾದ ಡಾಲರ್ ಎದುರು ರೂಪಾಯಿ ಕುಸಿತ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಳಿ ಇರುವ ಒಂದಷ್ಟು ಡಾಲರ್ ಮಾರಾಟ ಮಾಡಿದೆ ಎನ್ನಲಾಗಿದೆ.
ಕುಸಿಯುತ್ತಿರುವ ರೂಪಾಯಿಯನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಹೀಗಾಗಿ ಗುರುವಾರ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನಾಂತ್ಯಕ್ಕೆ ಅಮೆರಿಕದ ಡಾಲರ್ ಎದುರು ರೂಪಾಯಿ 13 ಪೈಸೆ ಏರಿಕೆಯಾಗಿ 81.80 ರೂ.ಗೆ ಮುಕ್ತಾಯಗೊಂಡಿದೆ. ಮಧ್ಯಂತರದಲ್ಲಿ 81.58 ರೂ.ಗೆ ಏರಿಕೆಯಾಗಿತ್ತು. ಬುಧವಾರದ ವಹಿವಾಟಿನಲ್ಲಿ 82 ರೂ.ಗೆ ಕುಸಿದು, ದಿನಾಂತ್ಯಕ್ಕೆ 81.93 ರೂ.ಗೆ ವಹಿವಾಟು ಕೊನೆಗೊಳಿಸಿತ್ತು. ಈ ವಾರದ ಆರಂಭದಿಂದಲೂ ರೂಪಾಯಿ ಕುಸಿತದ ಶ್ರೇಯಾಂಕವನ್ನೇ ದಾಖಲಿಸುತ್ತಾ ಬಂದಿದೆ.