ಪಂಜಾಬ್, ಸೆ.30 (DaijiworldNews/HR): ಪಂಜಾಬ್ನ ಪಠಾಣ್ಕೋಟ್ನ ಸಿವಿಲ್ ಆಸ್ಪತ್ರೆಗೆ ಹೆರಿಗೆ ನೋವಿನಿಂದ ಬಂದ ಗರ್ಭಿಣಿ ಮಹಿಳೆಯನ್ನು ಅಲ್ಲಿನ ಸಿಬ್ಬಂದಿಗಳು ದಾಖಲಿಸಿಕೊಳ್ಳದೇ, ಮಹಿಳೆ ಮಹಡಿಯ ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಗರ್ಭಿಣಿ ಮಹಿಳೆಯ ಪತಿ ಜಂಗ್ ಬಹದ್ದೂರ್ ಅವರು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿ ಮತ್ತು ವೈದ್ಯರಲ್ಲಿ ವಿನಂತಿಸಿದ್ದಾರೆ. ಆದರೆ ಯಾರೂ ಕೂಡ ಅವನ ಮಾತಿಗೆ ಪ್ರತಿಕ್ರಿಯಿಸಿಲ್ಲ. ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆ ಆಸ್ಪತ್ರೆ ಮಹಡಿಯ ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾಳೆ.
ಇನ್ನು ಈ ವೇಳೆ ಅಲ್ಲಿದ್ದವರು ಮಹಿಳೆಗೆ ಬಟ್ಟೆ ಹೊದಿಸಿ ಸಹಾಯಕ್ಕೆ ಮುಂದಾಗಿದ್ದು, ಈ ಸರ್ಕಾರಿ ಆಸ್ಪತ್ರೆಯವರ ನಿರ್ಲ್ಯಕ್ಷ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.
ಸಿಬ್ಬಂದಿಗಳ ಈ ವರ್ತನೆಯನ್ನು ನೋಡಿರುವ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.