ಶಿವಮೊಗ್ಗ, ಸೆ.30 (DaijiworldNews/HR): ಭದ್ರಾವತಿಯಲ್ಲಿ ನಾಗರ ಹಾವೊಂದಕ್ಕೆ ಉರಗ ರಕ್ಷಕ ಅಲೆಕ್ಸ್ ಎಂಬವರು ಮುತ್ತಿಡಲು ಹೋದಾಗ ಹಾವು ತಿರುಗಿ ತುಟಿಗೆ ಕಚ್ಚಿರುವ ಘಟನೆ ನಡೆದಿದೆ.
ಭದ್ರಾವತಿಯ ಅಲೆಕ್ಸ್ ಹಾಗೂ ರೋನಿ ಎಂಬುವರು ಉರಗ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಮದುವೆ ಮನೆಯಲ್ಲಿ ಎರಡು ನಾಗರ ಹಾವುಗಳು ಒಟ್ಟಿಗೆ ಕಾಣಿಸಿಕೊಂಡಿವೆ. ಈ ವೇಳೆ ಹಾವು ಹಿಡಿದು ಅಲೆಕ್ಸ್ ಎಂಬಾತ ಅದಕ್ಕೆ ಮುತ್ತು ಕೊಡಲು ಮುಂದಾದಾಗ ಈ ವೇಳೆ ಹಾವು ತಿರುಗಿ ತುಟಿಗೆ ಕಚ್ಚಿದೆ.
ಇನ್ನು ಹಾವನ್ನು ಕಾಡಿಗೆ ಬಿಟ್ಟು ಅಲೆಕ್ಸ್ ಅವರನ್ನು ಭದ್ರಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.