ನವದೆಹಲಿ, 29 (DaijiworldNews/DB): ಜನಪ್ರಿಯ ಗೇಮಿಂಗ್ ಯೂಟ್ಯೂಬರ್ 'ಸ್ಕೈಲಾರ್ಡ್' ಎಂದೇ ಚಿರಪರಿಚಿತರಾದ ಅಭ್ಯುದಯ್ ಮಿಶ್ರಾ ಅವರು ಮಧ್ಯಪ್ರದೇಶದಲ್ಲಿ ಅಪಘಾತಕ್ಕೆ ಬಲಿಯಾಗಿದ್ದಾರೆ.
ಮಧ್ಯ ಪ್ರದೇಶ ಸರ್ಕಾರವು ಪ್ರವಾಸೋದ್ಯಮ ಉತ್ತೇಜನದ ಭಾಗವಾಗಿ ಹಮ್ಮಿಕೊಂಡ ಬೈಕ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸೋಹಗಪುರ್ ರಾಜ್ಯ ಹೆದ್ದಾರಿಯಲ್ಲಿ ಬೈಕ್ಗೆ ಟ್ರಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಅವರು ದುರ್ಮರಣಕ್ಕೀಡಾಗಿದ್ದಾರೆ. ಸೆಪ್ಟೆಂಬರ್ 21 ರಂದು ಖಜುರಾಹೋದಿಂದ ಬೈಕ್ ಯಾತ್ರೆ ಆರಂಭಗೊಂಡಿತ್ತು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಟ್ರಕ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲ್ಟಿಪ್ಲೇಯರ್ ಶೂಟರ್ ಗೇಮ್ 'ಗರೇನಾ ಫ್ರೀ ಫೈರ್' ನ ತಮ್ಮ ಗೇಮ್ಪ್ಲೇ ಕುರಿತು ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೋಗಳ ಮೂಲಕ ಮಾಹಿತಿ ನೀಡುತ್ತಿದ್ದರು. ಅಲ್ಲದೆ ಯೂಟ್ಯೂಬ್ನಲ್ಲಿ 10.64 ಲಕ್ಷ ಫಾಲೋವರ್ಸ್ಗಳನ್ನು ಹಾಗೂ ಇನ್ಸ್ಟಾಗ್ರಾಂನಲ್ಲಿ 4.24 ಲಕ್ಷ ಫಾಲೋವರ್ಸ್ಗಳನ್ನು ಹೊಂದಿದ್ದರು. ಮಧ್ಯ ಪ್ರದೇಶ. ದಿ ಹಾರ್ಟ್ ಆಫ್ ಇನ್ಕ್ರೆಡಿಬಲ್ ಇಂಡಿಯಾ,'' ಎಂದು ಬರೆದು ಇನ್ಸ್ಟಾಗ್ರಾಂನಲ್ಲಿ ಅವರು ಕೊನೆಯ ಪೋಸ್ಟ್ ಹಾಕಿದ್ದರು.