ಬೆಂಗಳೂರು, 29 (DaijiworldNews/DB): ದೇಶದಲ್ಲಿ ಪಿಎಫ್ಐ ನಿಷೇಧವನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ 'ಸೆಪ್ಟಂಬರ್ ಕ್ರಾಂತಿ' ಎಂದು ಕರೆದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾಗರಿಕ ಹಿತಾಸಕ್ತಿಗಳಿಗೆ ವಿರುದ್ದವಾದ ಸಂಘಟನೆಗಳು ಸೆಪ್ಟಂಬರ್ನಲ್ಲಿಯೇ ನಿಷೇಧಗೊಂಡಿರುವುದು ವಿಶೇಷ. ಈ ಹಿಂದೆ ಸಿಮಿ ಸಂಘಟನೆಯನ್ನು 26.09.01ರಂದು ನಿಷೇಧಿಸಲಾಯಿತು. ಇದೀಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನೂ ಅದೇ ಸೆಪ್ಟಂಬರ್ ತಿಂಗಳಿನಲ್ಲಿ ಅಂದರೆ 28.09.22ರಂದು ನಿಷೇಧಿಸಲಾಗಿದೆ. ಆ ಮೂಲಕ ಇದೊಂದು ಸೆಪ್ಟಂಬರ್ ಕ್ರಾಂತಿ ಎಂದು ಬರೆದುಕೊಂಡಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ ಕಾನೂನುಬಾಹಿರ ಚಟುವಟಿಕೆಗಳ ವಿರುದ್ದ ನಾವು ಎಂದಿಗೂ ಇದ್ದೇವೆ. ಆ ಮೂಲಕ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಮತ್ತು ಅದಕ್ಕೆ ನಾವು ಬದ್ದರಾಗಿದ್ದೇವೆ ಎಂದಿರುವ ಅವರು, ಪರಿತ್ರಾಣಾಯ ಸಾಧುನಾಮ, ವಿನಾಶಾಯ ಚ ದುಷ್ಕೃತಾಮ್ ಎಂಬ ಭಗವದ್ಗೀತೆಯ ಸಾಲುಗಳನ್ನು ಬರೆದಿದ್ದಾರೆ.