ಮೈಸೂರು, ಸೆ 29 (DaijiworldNews/MS): ಕಾಂಗ್ರೆಸ್ ಪಕ್ಷವನ್ನು ಭಾರತದಲ್ಲಿ ನಿಷೇಧಿಸುವ ಅಗತ್ಯವಿದೆ ಎಂದ ನಳಿನ್ ಕುಮಾರ್ ಅವರಿಗೆ ಮೊದಲು ಮಂಪರು ಪರೀಕ್ಷೆ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ನಡೆಸಿದರೆ ಮಂಗಳೂರಿನಲ್ಲಿ ಪಿಎಫ್ ಐ ಎಸ್ ಡಿಪಿಐ ಜೊತೆ ಯಾರ ಸಂಬಂಧವಿದೆ ಎಂದು ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ
ಗುಜರಾತ್ ಚುನಾವಣೆ ವೇಳೆ ಯಾವಾಗಲೂ ನರೇಂದ್ರ ಮೋದಿಗೆ ಜೀವ ಬೆದರಿಕೆ ಎಂಬ ವಿಚಾರ ಮುನ್ನೆಲೆಗೆ ಬಿಜೆಪಿ ತರುತ್ತದೆ. ಲೂಟಿ ರವಿಯ ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.