ಲಕ್ನೋ, ಸೆ 29 (DaijiworldNews/MS): ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಅವಿರೋಧವಾಗಿ ಗುರುವಾರ ಆಯ್ಕೆಯಾಗಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅಖಿಲೇಶ್ ಯಾದವ್ ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ರಮಾಬಾಯಿ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಕಟಿಸಿದ್ದಾರೆ.
ಅಖಿಲೇಶ್ ಅವರು ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರಿಂದ ಪಕ್ಷದ ಅಧಿಕಾರವನ್ನು ವಹಿಸಿಕೊಂಡಾಗ 2017 ರ ಜನವರಿಯಲ್ಲಿ ಪಕ್ಷದ ತುರ್ತು ಸಭೆಯಲ್ಲಿ ಮೊದಲ ಬಾರಿಗೆ ಎಸ್ಪಿ ಅಧ್ಯಕ್ಷರಾದರು.
ಅದೇ ವರ್ಷದಲ್ಲಿ, ಆಗ್ರಾದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಪಕ್ಷದ ಅಧ್ಯಕ್ಷರಾಗಿ ಅಖಿಲೇಶ್ ಅವರ ಅವಧಿ ಐದು ವರ್ಷಗಳವರೆಗೆ ಇರುತ್ತದೆ.