ನವದೆಹಲಿ, ಸೆ 29 (DaijiworldNews/MS): ಕೇಂದ್ರವು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರಿನಲ್ಲಿ 6 ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಲಾಗಿದ್ದು ಈ ನಿಯಮ 2023ರ ಅ.1 ರಿಂದ ಜಾರಿಗೆ ಬರಲಿದೆ.
ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು, 'ಕಾರುಗಳಲ್ಲಿ ಕನಿಷ್ಠ ಆರು ಏರ್ ಬ್ಯಾಗ್ ನಿಯಮ ಕಡ್ಡಾಯ ಎಂಬ ಹೊಸ ಕಾಯ್ದೆ 2023ರ ಅಕ್ಟೋಬರ್ 01ರಿಂದ ಅನ್ವಯವಾಗಲಿದೆ.
ವೆಚ್ಚ ಮತ್ತು ರೂಪಾಂತರ ಏನೇ ಇರಲಿ, ಕಾರಿನಲ್ಲಿ (M-1 Category) ಕನಿಷ್ಠ 6 ಏರ್ಬ್ಯಾಗ್ ಕಡ್ಡಾಯ. ಆಟೋ ಉದ್ಯಮವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿ ನಿರ್ಬಂಧಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗಿದೆ' ಎಂದಿದ್ದಾರೆ.
ಈ ಮೊದಲು, ಆರು ಏರ್ಬ್ಯಾಗ್ಗಳ ಕಡ್ಡಾಯ ನಿಯಮವನ್ನು ಜಾರಿಗೆ ತರಲು ಈ ವರ್ಷದ ಅಕ್ಟೋಬರ್ 1 ಗಡುವು ನೀಡಲಾಗಿತ್ತು.