ನವದೆಹಲಿ, ಸೆ 29 (DaijiworldNews/DB): ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು ಭೇಟಿಯಾದ ಬಳಿಕ ಈ ಹೇಳಿಕೆ ನೀಡಿರುವ ಅವರು, ನಾನು ಈ ವಿಷಯ ಮಾತನಾಡುವುದಕ್ಕಾಗಿಯೇ ಸೋನಿಯಾ ಗಾಂಧಿಯವರ ಬಳಿಗೆ ತೆರಳಿದ್ದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ರಾಜಸ್ಥಾನ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಿನ್ನೆಯ ಘಟನೆ ನಮ್ಮೆಲ್ಲರಿಗೂ ಆತಂಕಕ್ಕೆ ಕಾರಣವಾಗಿದೆ. ಇಂದು ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದು, ಅವರ ಬಳಿ ಕ್ಷಮೆ ಯಾಚನೆ ಮಾಡಿದ್ದೇನೆ. ಐದು ದಶಕಗಳಿಂದ ನಿಷ್ಠೆಯಿಂದ ಕಾಂಗ್ರೆಸ್ಗಾಗಿ ದುಡಿದಿದ್ದು, ಸೋನಿಯಾ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಮೂರು ಬಾರಿ ಆಯ್ಕೆಯಾಗಿದ್ದೇನೆ. ಮುಂದೆಯೂ ರಾಜಸ್ಥಾನ ಮುಖ್ಯಮಂತ್ರಿಯಾಗಿಯೇ ಮುಂದುವರಿಯಲು ಬಯಸುತ್ತೇನೆ ಎಂದವರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.