ಬೆಂಗಳೂರು, ಸೆ 29 (DaijiworldNews/MS): ಮುಂಬರುವ 2023ರ ಚುನಾವಣೆ ವೇಳೆಯಲ್ಲಿ ರಾಜ್ಯ ರಾಜಕೀಯದಲ್ಲಿ ತಮ್ಮ ಹೆಸರು ಬದಲಾಯಿಸಿಕೊಂಡು ಶೋಭಾ ಕರಂದ್ಲಾಜೆ ಅವರು ಮಹತ್ವದ ಹುದ್ದೆ ಅಲಂಕರಿಸುತ್ತಾರೆ ಎನ್ನುವ ವದಂತಿಯೊಂದು ದಟ್ಟವಾಗಿ ಕೇಳಿಬರುತ್ತಿದೆ.
ಒಕ್ಕಲಿಗರಾಗಿರುವ ಶೋಭಾ ಕರಂದ್ಲಾಜೆ ಮಹತ್ವದ ಹುದ್ದೆ ಅಲಂಕರಿಸುವ ಮುನ್ನ "ಗೌಡ" ಎನ್ನುವ ಜಾತಿ ಲೆಕ್ಕಚಾರದ ಟ್ರಂಪ್ ಕಾರ್ಡ್ ಹೈಕಮಾಂಡ್ ಬಳಕೆ ಮಾಡಲಿದೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ.
2023ರ ಚುನಾವಣೆ ವೇಳೆ ʻಶೋಭಾ ಕರಂದ್ಲಾಜೆ ತಮ್ಮ ಹೆಸರನ್ನುʻ ಶೋಭಾ ಗೌಡ ʼ ಎಂದು ಬದಲಾಯಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಇದು ಬರಿ ವದಂತಿನಾ ಅಥವಾ ಬಿಜೆಪಿ ರಾಜಕೀಯದಲ್ಲಿನ ಊಹಾಪೋಹವೇ, ಜ್ಯೋತಿಷ್ಯ ಸಲಹೆಯೋ, ಅಥವಾ ಹೈಕಮಾಂಡ್ ಸೂಚನೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸರ್ ನೇಮ್ ಕರಂದ್ಲಾಜೆ ಬದಲಿಗೆ ಗೌಡ ಅಂತಾ ಸೇರಿಸಲು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಶೋಭಾ ಅಪ್ತವಲಯದಿಂದ ಮಾಹಿತಿ ರವಾನೆಯಾಗಿದೆ.