ಬೆಂಗಳೂರು, ಸೆ 29 (DaijiworldNews/MS): ಭಯೋತ್ಪಾದನೆಯ ಮೂಲಕವೂ ಓಟ್ ಬ್ಯಾಂಕ್ ಗಟ್ಟಿಗೊಳಿಸಬಹುದೆಂಬ ಐಡಿಯಾ ಕಂಡುಕೊಂಡ ಜಗತ್ತಿನ ಏಕೈಕ ಪಕ್ಷ ಅಂತಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಭಾರತೀಯ ಜನತಾ ಪಕ್ಷ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಉಗ್ರವಾದದ ಪೋಷಣೆಯ ಮೂಲಕ ದೇಶದ ಆಂತರಿಕ ಭದ್ರತೆಗೆ ಕಾಂಗ್ರೆಸ್ ಕುತ್ತು ತಂದಿದೆ.ಕಾಂಗ್ರೆಸ್ಸಿಗರೇ, ಮತಾಂಧರ ಬಗ್ಗೆ ಮೃದು ಧೋರಣೆ ಏಕೆ ಎಂದು ಪ್ರಶ್ನಿಸಿದೆ.
2013 ರಲ್ಲಿ ಮಂಗಳೂರಿನ ಕಾಂಗ್ರೆಸ್ ಚುನಾವಣಾ ಕಚೇರಿಗೆ ಆಗಮಿಸಿದ್ದ ಕೇರಳದ ಅಂದಿನ ಸಿಎಂ #ಪಿಎಫ್ಐ ನಿಷೇಧಕ್ಕಾಗಿ ಆಗ್ರಹಿಸುತ್ತೇವೆ ಎಂದು ಹೇಳಿದ್ದರು.ಅದೇ ಚುನಾವಣೆಯ ಬಳಿಕ ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಮೇಲಿನ 175 ಪ್ರಕರಣಗಳನ್ನು ವಾಪಾಸ್ ಪಡೆಯಿತು. "ಉಗ್ರಪರಿವಾರದ" ಮತ ಕಳೆದುಕೊಳ್ಳುವ ಭಯವಾಗಿತ್ತೇ ಎಂದು ಕೇಳಿದೆ.
ಗಾಂಧೀಜಿ ಆಶಯದಂತೆ ಕಾಂಗ್ರೆಸ್ ಪಕ್ಷವನ್ನು ಅಂದೇ ವಿಸರ್ಜಿಸಿದ್ದರೆ ದೇಶಕ್ಕೆ ಆಂತರಿಕ ಅಪಾಯ ಎದುರಾಗುತ್ತಿರಲಿಲ್ಲ.ಏಕೆಂದರೆ ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕಿದ್ದು ಮತ್ತು ಭಯೋತ್ಪಾದನೆಯನ್ನು ಪೋಷಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಮತ್ತು ಭಯೋತ್ಪಾದನೆ ಒಂದೇ ನಾಣ್ಯದ ಎರಡು ಮುಖವಲ್ಲದೆ ಮತ್ತೇನು ಎಂದು ಹೇಳಿದೆ.