ನವದೆಹಲಿ, ಸೆ 29 (DaijiworldNews/MS): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಿರುವ ಬೆನ್ನಲ್ಲೇ ಆ ಸಂಘಟನೆಯ ಸೋಷಿಯಲ್ ಮೀಡಿಯಾ ಖಾತೆಗಳಾದ ಟ್ವಿಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.
ಕೇಂದ್ರ ಗೃಹ ಇಲಾಖೆ ಮನವಿ ಮಾಡಿದ ಬಳಿಕ, ಭಾರತದಲ್ಲಿ ಮೆಟಾ ಒಡೆತನದ ಫೇಸ್ಬುಕ್ ಮತ್ತು ಟ್ವಿಟರ್ ಈ ಕ್ರಮ ಕೈಗೊಂಡಿವೆ. ಅಲ್ಲದೇ ಪಿಎಫ್ಐ ಸಂಘಟನೆಯ ಮುಖಂಡರ ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಖಾತೆಯನ್ನೂ ಅಳಿಸಿ ಹಾಕಲಾಗಿದೆ.
@PFIofficial ಖಾತೆಯನ್ನು ಅಳಸಿಹಾಕಲಾಗಿದೆ. 81,000 ಬೆಂಬಲಿಗರು ಟ್ವಿಟರ್ನಲ್ಲಿ ಇದಕ್ಕೆ ಇದ್ದರು. ಟ್ವಿಟರ್ ತನ್ನ ಅಧ್ಯಕ್ಷ ಓಎಂಎ ಸಲಾಮ್ (@oma_salam) ಸದ್ಯದಲ್ಲೇ 50ಕೆ ಫಾಲೋವರ್ಸ್ ದಾಟುವ ಸನಿಹದಲ್ಲಿದ್ದರು. ಇನ್ನು ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್ (@AnisPFI) ಅವರ ಹ್ಯಾಂಡಲ್ಗಳನ್ನು ಟ್ವಿಟರ್ ತಡೆಹಿಡಿದಿದೆ. ನಿಷೇಧಕ್ಕೂ ಮುನ್ನ ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ ನಡೆಸಿದ ದಾಳಿಗಳಲ್ಲಿ ಬಂಧಿತರಾದ 200ಕ್ಕೂ ಹೆಚ್ಚು ಪಿಎಫ್ಐ ನಾಯಕರಲ್ಲಿ ಇವರಿಬ್ಬರೂ ಸೇರಿದ್ದಾರೆ.