ಶ್ರೀನಗರ, ಸೆ 29 (DaijiworldNews/DB): ಬಸ್ಸೊಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಬಸ್ನಲ್ಲಿ ನಿಗೂಢ ಸ್ಪೋಟ ಸಂಭವಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ನಡೆದಿದೆ. ಎಂಟು ಗಂಟೆ ಅವಧಿಯಲ್ಲಿ ಇದು ಎರಡನೇ ಸ್ಪೋಟ ಎಂದು ತಿಳಿದು ಬಂದಿದೆ.
ಬಸ್ ಗುರುವಾರ ಮುಂಜಾನೆ ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಈ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ, ಹಾನಿ ಉಂಟಾಗಿಲ್ಲ. ಜಮ್ಮು ಕಾಶ್ಮೀರ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಬುಧವಾರ ರಾತ್ರಿ 10.45 ರ ಸುಮಾರಿಗೆ ಡೊಮೈಲ್ ಚೌಕ್ನಲ್ಲಿ ಬಸ್ನಲ್ಲಿ ಇದೇ ರೀತಿಯಲ್ಲಿ ನಿಗೂಢ ಸ್ಫೋಟ ಸಂಭವಿಸಿ ಇಬ್ಬರಿಗೆ ಗಾಯವಾಗಿತ್ತು. ಮೊದಲ ಸ್ಪೋಟದ ಜಾಗದಿಂದ ಕೇವಲ 4 ಕಿಮೀ ದೂರದಲ್ಲಿ ಇದೀಗ ಮತ್ತೊಂದು ಸ್ಪೋಟ ನಡೆದಿದೆ.