ಮಹಾರಾಷ್ಟ್ರ (ಪಾಲ್ಘರ್), ಸೆ 28 (DaijiworldNews/DB): ಹೈಡ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಕಾರ್ಮಿಕರು ಸಜೀವದಹನಗೊಂಡ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿನ ಕೈಗಾರಿಕಾ ಘಟಕದಲ್ಲಿ ನಡೆದಿದೆ.
ಘಟನೆಯಲ್ಲಿ ಎಂಟು ಮಂದಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಘಿದೆ. ಸಾವನ್ನಪ್ಪಿದವರು ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯಲಾಗದಂತ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಚಂದರಪದ ಪ್ರದೇಶದ ವಿದ್ಯುತ್ ಉಪಕರಣಗಳ ತಯಾರಿಕಾ ಕಂಪನಿ ಇದಾಗದ್ದು, ಮಧ್ಯಾಹ್ನ 3 ಗಂಟೆಗೆ ದುರಂತ ಸಂಭವಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿಯೊಬ್ಬರು ತಿಳಿಸಿರವುದಾಗಿ ವರದಿಯಾಗಿದೆ.